Friday 29 June 2012

ವೆಂಕಟಾಚಲಯ್ಯ ಗುರುಗಳು




          ಪೂಜ್ಯ ವೆಂಕಟಾಚಲಯ್ಯ ಅವಧೂತರನ್ನು ನಾನು ಮೊದಲ ಭಾರಿ ನೋಡಿ ಹದಿನೈದು ವರ್ಷಗಳೇ ಆಗಿರಬೇಕು.ಹಾಸನದ ಸರ್ಕಾರಿ ಕಾಲೇಜಿನಲ್ಲಿ ರೀಡರ್ ಆಗಿದ್ದ ಶ್ರೀ ಉಪೇಂದ್ರರು ನನ್ನ ಆಪ್ತ ಮಿತ್ರರು. ಗುರುಗಳನ್ನು ಬಹಳ ದಿನಗಳಿಂದ ಬಲ್ಲವರು. ಅವರ ಪಟ್ಟ ಶಿಷ್ಯರು. ಒಂದು ದಿನ ಉಪೇಂದ್ರರು ಗುರುಗಳನ್ನು ನೋಡಲು  ನನ್ನನ್ನು ಸಕ್ಕರಾಯಪಣಕ್ಲ್ಕೆ ಕರೆದುಕೊಂಡು    ಹೋದರು.ಕುಳಿತು ಮಾತನಾಡುವಾಗ ಗುರುಗಳು ನನಗೆ ಹೇಳಿದರು" ನಿಮ್ಮ ಕೈ ಬೆರಳು ಮುಟ್ಟ ಬಹುದಾ?"
-ಅದಕ್ಕೇನಂತೆ ಗುರುಗಳೇ,ಎಂದು ಬಲ ಗೈ ಚಾಚಿದೆ. ಗುರುಗಳು ನನ್ನ ಕೈ ಬೆರಳುಗಳನ್ನು ಹಿಡಿದು ತಮ್ಮ ಬೆರಳುಗಳಿಂದ ಸ್ಪರ್ಷ ಮಾಡುತ್ತಾ ಹೇಳಿದರು"  ನಿಮ್ಮ  ತಂದೆತಾಯಿಗೆ   ನೀವು  ಮೂರುಜನ ಗಂಡು ಮಕ್ಕಳು, ಮೂರುಜನ ಹೆಣ್ಣು ಮಕ್ಕಳು......."
-ಹೌದು ಗುರುಗಳೇ
-ನಾಲ್ಕಡಿ ಎತ್ತರದ  ಕುಳ್ಳ    ಹೆಂಗಸು ಇದ್ದಾರಲ್ಲಾ............ಎಂದು ಮಾತು ಆರಂಭಿಸಿದರು
-ಇಲ್ಲ ಗುರುಗಳೇ ನಮ್ಮ ಮನ್ಬೆಯಲ್ಲಿ  ಕುಳ್ಳ ಹೆಂಗಸರು ಯಾರೂ ಇಲ್ಲ. ಮಾತಿನ ಮಧ್ಯೆದಲ್ಲಿಯೇ ನಾನು ಬಾಯಿ ಹಾಕಿದ್ದೆ. ಏನು ಹೇಳುತ್ತಿದ್ದರೋ, ತಿಳಿಯದು, ವಿಚಾರ ಬೇರೆ ಕಡೆ ಹೋಯ್ತು. -" ನಿಮಗೀಗ ಹಣಕಾಸಿನ ಸಮಸ್ಯೆ ಎದುರಾಗಿದೆ. ಚಿಂತೆ ಬೇಡ, ಇದೇ ಅಕ್ಟೋಬರ್ 24 ರ ನಂತರ ನೀವು ಈ ಸಮಸ್ಯೆಯಿಂದ ಮುಕ್ತರಾಗುತ್ತೀರಿ!

                         ಅಬ್ಭಾ! ಗುರುಗಳು ನನ್ನ ಜಾತಕವನ್ನೆಲ್ಲಾ ಜಾಲಾಡಿದ್ದರು. ಗುರುಗಳು ಹೇಳಿದಂತೆ ಆವರ್ಷದ ಅಕ್ಟೋಬರ್ 24 ರ ನಂತರ ನನಗೆ ಆರ್ಥಿಕ ಸಮಸ್ಯೆ ಎದುರಾಗಲೇ ಇಲ್ಲ!! ನಾನೇ ತಪ್ಪು ಮಾಡಿದ್ದೆ. ನಮ್ಮ ಮನೆಯಲ್ಲಿ ನಮ್ಮ ದೊಡ್ದಮ್ಮ ಒಬ್ಬರು ಕುಳ್ಳನೆಯ ಹೆಂಗಸು ನಮ್ಮ ಮನೆಯಲ್ಲೇ ಇದ್ದರು, ನಾನು ಗುರುಗಳಮಾತಿಗೆ ಏನೂ ಹೇಳದೆ ಇದ್ದಿದ್ದರೆ ಅವರು ಏನು ಹೇಳುತ್ತಿದ್ದರೋ!!!